About Me
Text
ಹೌದು.ವಿಜಯಕರ್ನಾಟಕ ಚಿತ್ರದುರ್ಗ ಆವೃತ್ತಿ ಬಯಲಸೀಮೆಯ ಓಯಸಿಸ್. ಪತ್ರಿಕೆಯ ಆವೃತ್ತಿಗೆ ಒಳಪಟ್ಟಿರುವ ಜಿಲ್ಲೆಗಳು ಚಿತ್ರದುರ್ಗ ಹಾಗೂ ದಾವಣಗೆರೆ. ೧೦ ವರ್ಷಗಳ ಹಿಂದೆ ಅಂದರೆ ೧೯೯೭ರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಪ್ರತ್ಯೇಕಗೊಂಡ ದಾವಣಗೆರೆ ಜಿಲ್ಲೆಯ ಅಸ್ತಿತ್ವ ಪಡೆಯಿತು.ಅವಳಿ ಜಿಲ್ಲೆಗಳು ಬಯಲಸೀಮೆಯಾದರೂ ಭದ್ರೆಯ ಕೃಪಾಕಟಾಕ್ಷದಿಂದ ದಾವಣಗೆರೆ ಬಹುತೇಕ ಹಳ್ಳಿಗಳು ಹಸಿರಿನಿಂದ ನಳನಳಿಸುತ್ತಿವೆ.ನೀರಾವರಿಯ ಸೌಲಭ್ಯವಿಲ್ಲದೆ ಸದಾ ಬರದ ಭೀತಿಯಲ್ಲಿ ಬದುಕುವುದು ಚಿತ್ರದುರ್ಗದ ಜಾಯಮಾನವಾಗಿದೆ.ಚಿತ್ರದುರ್ಗ ಕೋಟೆ ಸೇರಿದಂತೆ ಹತ್ತು ಹಲವು ಐತಿಹಾಸಿಕ ತಾಣಗಳನ್ನು ಜಿಲ್ಲೆ ಹೊಂದಿರುವುದು ಹೆಗ್ಗಳಿಕೆ ಎಂಬುದೇ ಸಮಾಧಾನಕರ ವಿಷಯ. ಆದಾಗ್ಯೂ ಅವಳಿ ಜಿಲ್ಲೆಗಳಿಗೆ ತನ್ನದೇ ಆದ ಸಮಸ್ಯೆಗಳು,ನಿರೀಕ್ಷೆಗಳಿವೆ. ಇಂತಹ ಸಂದರ್ಭದಲ್ಲಿ ಬಯಲಸಿರಿಯಾಗಿ ವಿಕ ಸೇವೆ ಸಲ್ಲಿಸುತ್ತಿದೆ.
Monday, June 29, 2009
Subscribe to:
Post Comments (Atom)


0 comments:
Post a Comment